
- 24 Aug 2020
- SvpUdupee357
- News
- Comments: 0
ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿಯಿಂದ ಸೆಪ್ಟೆಂಬರ್ 15ರಿಂದ 23ರವರೆಗೆ ಸಂವಿಪ್ರ ಸಂಭ್ರಮ- 2020 ನಡೆಯಿತು. ಮೊದಲನೆಯ ದಿನ ಪಟ್ಲ ಸತೀಶ್ ಶೆಟ್ಟಿ ಹಾಗೂ ಕಾವ್ಯಶ್ರೀ ಅಜೇರು ಹಾಡಿದ ‘ಯಾರೆ ನೀನು ಮೋಹನಂಗಿ’ ಎಂಬ ವಿನೂತನ ಯಕ್ಷ ನಾಟ್ಯ ಪ್ರಸಾರಗೊoಡಿತು . ದಿನಾಂಕ 16 ರಿಂದ 22ರ ವರೆಗೆ ಕಥಾ ಸಪ್ತಾಹ ನಡೆದು ,ಕನ್ನಡ ನಾಡಿನ ಶ್ರೇಷ್ಠ ಕಥೆಗಾರರ ಕಥೆಗಳನ್ನು ಅಹಲ್ಯ ಬಲ್ಲಾಳ್ ಮುಂಬೈ, ಜೀವನ್ ರಾಂ ಸುಳ್ಯ , ಡಾ ಕಾತ್ಯಾಯಿನಿ ಕುಂಜಿಬೆಟ್ಟು , ಶಶಿರಾಜ್ ಕಾವೂರು, ಗಣೇಶ್ ಮಂದರ್ತಿ , ಬಿಂದು ರಕ್ಷಿದಿ, ದಿಶಾ ರಮೇಶ್ ಮೈಸೂರು ಇವರು ವಾಚಿಸಿದರು . 23ರಂದು ಸಂಸ್ಥೆಯ ವೆಬ್ಸೈಟ್ ಉದ್ಘಾಟನೆಗೊ೦ಡಿತು., ಉಡುಪಿ ಗಾಂಧಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಡಾಕ್ಟರ್ ಹರೀಶ್ಚಂದ್ರ ಅವರು ಉದ್ಘಾಟಿಸಿದರು . ಈ ಎಲ್ಲಾ ಕಾರ್ಯಕ್ರಮಗಳು ಪ್ರತಿದಿನ ಸಂಜೆ 6ರಿಂದ ಸಂಸ್ಥೆಯ ಯೂಟ್ಯೂಬ್ ಹಾಗೂ ಫೇಸ್ಬುಕ್ ಚಾನೆಲ್ನಲ್ಲಿ ಪ್ರಸಾರಗೊ೦ಡಿತು .