
- 07 Apr 2021
- Padmasini Udyavara
- News
- Comments: 0
ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ ಎಂಜಿಎಂ ಕಾಲೇಜು ಉಡುಪಿ ಸಹಕಾರದೊಂದಿಗೆ ಏಪ್ರಿಲ್ 4 2021 ರಂದು ಶ್ರೀಮತಿ ಪ್ರಭಾವತಿ ಮತ್ತು ಉಡುಪಿ ವಿಶ್ವನಾಥ್ ಶೆಣಿೈ ಪ್ರಾಯೋಜಿತ ವಿಶ್ವಪ್ರಭಾ ಪುರಸ್ಕಾರವನ್ನು ಕಲೆ, ಸಂಸ್ಕೃತಿ, ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಂಸ್ಥಾಪಕರಾದ ಡಾ| ಎಂ. ಮೋಹನ್ ಆಳ್ವಾ ಇವರಿಗೆ ನೀಡಲಾಯಿತು.
ಸಭಾ ಕಾರ್ಯಕ್ರಮದ ಮುನ್ನ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಯುವ ಬಳಗದಿಂದ ” ಜನಪದ ಧ್ವನಿ ತರಂಗ” ವಿಶಿಷ್ಟ ಕಾರ್ಯಕ್ರಮ ನಡೆಯಿತು.

ಸಭಾ ಕಾರ್ಯಕ್ರಮದ ನಂತರ ಶಿವಮೊಗ್ಗ ರಂಗಾಯಣದಿಂದ ನಾಟಕ ಹಕ್ಕಿ ಕಥೆ ಪ್ರದರ್ಶನಗೊಂಡಿತು. ನಾಟಕದ ನಿರ್ದೇಶನವನ್ನು ಗಣೇಶ್ ಮಂದರ್ತಿ ಮತ್ತು ಶ್ರವಣ್ ಹೆಗ್ಗೋಡು ಮಾಡಿದ್ದರು.