
- 07 Apr 2021
- Padmasini Udyavara
- News
- Comments: 0
ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ ಹಾಗೂ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಉಡುಪಿ ಶಾಖೆ ಇವರ ಜಂಟಿ ಆಶ್ರಯದಲ್ಲಿ ಮಾರ್ಚ್ 26ರಂದು ಸಂಜೆ 5 ಗಂಟೆಗೆ ವಿಶ್ವ ರಂಗಭೂಮಿ ದಿನಾಚರಣೆ ಯನ್ನು ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಉಡುಪಿಯ ಶಾಖೆಯಲ್ಲಿ ನಡೆಸಲಾಯಿತು. ಹಿರಿಯ ಕನ್ನಡದ ರಂಗಕರ್ಮಿಗಳಾದ ಎನ್. ರಾಜಗೋಪಾಲ್ ಬಲ್ಲಾಳ್ ಉಡುಪಿ, ಲಕ್ಷ್ಮಣ್ ಕುಮಾರ್ ಮಲ್ಲೂರು ಮಂಗಳೂರು, ಅಹಲ್ಯ ಬಲ್ಲಾಳ್ ಮುಂಬೈ, ಶಶಿಕಲಾ ಜೋಶಿ ಧಾರವಾಡ ,ಗಂಗಾಧರ ಕಿದಿಯೂರು ಉಡುಪಿ ಇವರನ್ನು ಈ ಸಂದರ್ಭದಲ್ಲಿ ಮಲಬಾರ್ ವಿಶ್ವರಂಗ ಪುರಸ್ಕಾರ’ ನೀಡಿ ಗೌರವಿಸಲಾಯಿತು. ಸಭಾ ಕಾರ್ಯಕ್ರಮಕ್ಕೂ ಮುನ್ನ ಗಿರ್ಮಿಟ್ ಚಲನಚಿತ್ರದ ನಾಯಕ ನಟ ಆಶ್ಲೇಷ ರಾಜ್ ಇವರ ಏಕವ್ಯಕ್ತಿ ರಂಗಪ್ರಯೋಗ ‘ರಾಷ್ಟ್ರವೀರ ಎಚ್ಚಮನಾಯಕ’ ಪ್ರದರ್ಶನಗೊಂಡಿತು.