
- 04 Nov 2020
- SvpUdupee357
- News
- Comments: 0
ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಉಡುಪಿ ಹಾಗೂ ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ ಇವರ ಜಂಟಿ ಆಶ್ರಯದಲ್ಲಿ ಮಲಬಾರ್ ವಿಶ್ವರಂಗ ಪುರಸ್ಕಾರ -2020 ಇದರ ಸಮಾರಂಭ ಇದೇ ಬರುವ ಭಾನುವಾರದಂದು ಸಂಜೆ 5 ಗಂಟೆಗೆ ಉಡುಪಿಯ ಗೀತಾಂಜಲಿ ಬಳಿ ಇರುವ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಸಂಕಿರ್ಣದಲ್ಲಿ ನಡೆಯಲಿದೆ.
ಈ ಬಾರಿ ಮಲಬಾರ್ ವಿಶ್ವರಂಗ ಪುರಸ್ಕಾರವನ್ನು ಹಿರಿಯ ರಂಗಕರ್ಮಿಗಳಾದ ಶ್ರೀನಿವಾಸ್ ಶೆಟ್ಟಿಗಾರ್, ಡಾ| ಮಾಧವಿ ಭಂಡಾರಿ, ಜಯರಾಮ್ ನೀಲಾವರ, ರಾಜಗೋಪಾಲ್ ಶೇಟ್ ಹಾಗೂ ಅಭಿಲಾಷಾ ಎಸ್. ಇವರುಗಳಿಗೆ ನೀಡಲಾಗುವುದು.
ಸಮಾರಂಭದ ಸಭಾಧ್ಯಕ್ಷತೆಯನ್ನು ಬಡಗುಬೆಟ್ಟು ಕೋ-ಆಪರೇಟಿವ್ ಸೊಸೈಟಿಯ ಮಹಾ ಪ್ರಬಂಧಕರಾದ ಇಂದ್ರಾಳಿ ಜಯಕರ ಶೆಟ್ಟಿ ಅವರು ವಹಿಸಲಿದ್ದು ,ಅತಿಥಿಗಳಾಗಿ ಮಣಿಪಾಲದ ಮಾಹೆಯ ಡಾ| ನೀತಾ ಇನಾಮ್ದಾರ್ ಹಾಗೂ ಖ್ಯಾತ ಚಲನಚಿತ್ರ ಸಂಗೀತ ನಿರ್ದೇಶಕರಾದ ರವಿ ಬಸ್ರೂರ್ ಭಾಗವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಕಥಾ ಸಪ್ತಾಹದಲ್ಲಿ ಆಯೋಜಿಸಿದ್ದ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಲಿದೆ.
ರಾತ್ರಿ ಎಂಟು ಗಂಟೆಗೆ ಸಾಧನಾ ಸಂಸ್ಕೃತಿ ಅಭಿಯಾನ ಮಾಲಿಕೆಯಲ್ಲಿ ರಾಜೇಶ್ ಭಟ್ ಪಣಿಯಾಡಿ ಅವರ ಪರಿಕಲ್ಪನೆಯಲ್ಲಿ ಮೂಡಿಬರುತ್ತಿರುವ ಸಾಕ್ಷ್ಯಚಿತ್ರ ವನ್ನು Samskruthi Vishwa ಯೂಟ್ಯೂಬ್ನಲ್ಲಿ ವೀಕ್ಷಿಸಬಹುದು ಎಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.